ಪಡುಬಿದ್ರಿ ಬಳಿ ಕಡಲಾಮೆ ರಕ್ಷಣೆ
ಪಡುಬಿದ್ರಿ: ಪಡುಬಿದ್ರಿಯ ಬ್ಲ್ಯೂ ಫ್ಲ್ಯಾಗ್ ಬೀಚ್ನ ಸಿಬ್ಬಂದಿ ಸಮುದ್ರದ ಬೃಹತ್ ಅಲೆಗಳ ಒಡೆತಕ್ಕೆ ಸಿಲುಕಿ ನಿಶಕ್ತಿಗೊಂಡ ಭಾರೀ ಗಾತ್ರದ ಕಡಲಾಮೆಯೊಂದನ್ನು ಗುರುವಾರ ರಕ್ಷಿಸಿ ಸಮುದ್ರಕ್ಕೆ ಬಿಟ್ಟ ಘಟನೆ ನಡೆದಿದೆ.
ಪಡುಬಿದ್ರಿಯ ಬೀಚ್ ಬಳಿ ಸುಮಾರು 11.30ರ ವೇಳೆಗೆ ಸಮುದ್ರ ತೀರದಲ್ಲಿ ಸುಮಾರು 25 ಕೆಜಿ ತೂಕದ ಕಡಲಾಮೆ ಬಳಲಿದ ಸ್ಥಿತಿಯಲ್ಲಿ ಇರುವು ದನ್ನು ಕಂಡು ಬಂತು. ಇದನ್ನು ಕಂಡ ಕರ್ತವ್ಯದಲ್ಲಿದ್ದ ಬ್ಲೂಫ್ಲ್ಯಾಗ್ ಬೀಚ್ನ ಸಿಬ್ಬಂದಿಗಳು ಕೂಡಲೇ ಅದನ್ನು ಹಿಡಿದು ಆರೈಕೆ ಮಾಡಿ ಸುಸ್ಥಿತಿಯಲ್ಲಿ ಮರಳಿ ಸಮುದ್ರಕ್ಕೆ ಬಿಡಲಾಗಿಯಿತು. ಬ್ಲ್ಯೂ ಫ್ಲ್ಯಾಗ್ ಬೀಚ್ನ ಸಿಬ್ಬಂದಿಗಳ ಈ ಕಾರ್ಯಕ್ಕೆ ಸಾವೃತ್ರಿಕ ಪ್ರಶಂಸೆಗೆ ಪಾತ್ರವಾಗಿದೆ.
Next Story