ಕಾರ್ಕಳ : ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಕಾರ್ಕಳ, ಜು.21: ಅಮಚೆ ಕಲ್ಯಾ ಗ್ರಾಮದ ಕುಂಟಾಡಿ ಬೋರುಗುಡ್ಡೆಯ ಸುಮಿತ್ರಾ ಪೂಜಾರಿ ಎಂಬವರ ಮನೆಗೆ ಮಂಗಳವಾರ ಬೆಳಗ್ಗೆ 11 ರಿಂದ 12 ರ ನಡುವಿನ ಅವಧಿಯಲ್ಲಿ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ವರದಿಯಾಗಿದೆ.
ಇಲ್ಲಿನ ಲಚ್ಚಿಲ್ ಹೌಸ್ನ ಮುಂಬಾಗಿಲಿನ ಚಿಲಕವನ್ನು ಆಯುಧದಿಂದ ಮೀಟಿ ತೆಗೆದು ಒಳಪ್ರವೇಶಿಸಿದ ದುಷ್ಕರ್ಮಿಗಳು, ಮನೆಯ ಕೊಠಡಿ ಯಲ್ಲಿದ್ದ ಗೊಡ್ರೇಜ್ ಕಪಾಟಿನಲ್ಲಿ ಇರಿಸಿದ್ದ 24ಗ್ರಾಂ ತೂಕದ ಚಿನ್ನದ ಹಾರ, ಎಂಟು ಗ್ರಾಮ್ ತೂಕದ ಕರಿಮಣಿಸರ, ಉಂಗುರ, ಮಗುವಿನ ಉಂಗುರ, ಎಂಟು ಗ್ರಾಂ ತೂಕದ ಬಳೆ, 6 ಗ್ರಾ ತೂಕದ ಕಿವಿ ಬೆಂಡೋಲೆ ಒಂದು ಜೊತೆ ಸೇರಿದಂತೆ ಒಟ್ಟು ಸುಮಾರು ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವುದಾಗಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story