ಕೋಟ ಗ್ರಾಪಂಗೆ ಕುಡಿಯುವ ನೀರಿನ ಘಟಕ ಕೊಡುಗೆ
ಕೋಟ ಜು 24: ದಿ.ಹಾಜಿ ಮುಹಮ್ಮದ್ ಶರೀಫ್ ಸ್ಮರಣಾರ್ಥವಾಗಿ ಅವರ ಮಕ್ಕಳು ಕೋಟ ಗ್ರಾಪಂಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಶುಕ್ರವಾರ ಕೊಡುಗೆಯಾಗಿ ನೀಡಿದರು.
ನೀರಿನ ಘಟಕವನ್ನು ಅಬ್ದುಲ್ ಸತ್ತಾರ್ ಸಾಹೇಬ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೋಟ ಮಸೀದಿಯ ಅಧ್ಯಕ್ಷ ಕೆ.ಎಂ. ಸಲೀಂ, ಕುಟುಂಬಿಕ ರಾದ ಶಾಹೀದ್ ಮಸೂದ್, ಉಡುಪಿ ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷ ಹಾಜಿ ಇಬ್ರಾಹಿಂ ಸಾಹೇಬ್ ಕೋಟ, ಕೋಟ ಮಸೀದಿಯ ಉಪಾಧ್ಯಕ್ಷ ಅಬೀದ್ ಹುಸೇನ್, ಕಾರ್ಯದರ್ಶಿ ಅಬುಲ್ ಬಶೀರ್, ನಿಕಟಪೂರ್ವ ಕಾರ್ಯದರ್ಶಿ ಸಿರಾಜ್ ಬಾರಿಕೆರೆ, ಕೋಟ ಗ್ರಾಪಂ ಅಧ್ಯಕ್ಷ ಅಜಿತ್ ದೇವಾಡಿಗ, ಗ್ರಾಮಲೆಕ್ಕಿಗ ಚೆಲುವರಾಜ್, ಸದಸ್ಯರಾದ ಚಂದ್ರ ಪೂಜಾರಿ, ಶೇಖರ್ ಗಿಳಿಯಾರು, ಯೋಗೇಂದ್ರ ಪೂಜಾರಿ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ಸಂತೋಷ್ ಪ್ರಭು ವಂದಿಸಿದರು.
Next Story