ಕುಂದಾಪುರ: ಐದು ಗಂಟೆಗಳ ಅವಧಿಯಲ್ಲಿ ಅಣ್ಣ - ತಂಗಿ ಮೃತ್ಯು
ಕುಂದಾಪುರ, ಜು. 27: ಅಣ್ಣ ಹಾಗೂ ತಂಗಿ ಒಂದೇ ದಿನ ಮೃತಪಟ್ಟ ಘಟನೆ ಸೋಮವಾರ ಬೆಳ್ವೆಯಲ್ಲಿ ಸಂಭವಿಸಿದೆ.
ಬೆಳ್ವೆಯ ಸಮೀಪದ ಹೆದ್ದಾರಿ ಜೆಡ್ಡು ನಿವಾಸಿ ಸುಬ್ಬಣ್ಣ ನಾಯ್ಕ್ (65) ಹಾಗೂ ಅವರ ತಂಗಿ ಗಿರಿಜಾ(60) ಐದು ಗಂಟೆಗಳ ಅವಧಿಯಲ್ಲಿ ಮೃತಪಟ್ಟವರಾಗಿದ್ದಾರೆ.
ಸೋಮವಾರ ಅಪರಾಹ್ನ 2 ಗಂಟೆ ಸುಮಾರಿಗೆ ತಂಗಿ ಗಿರಿಜಾ ಹೃದಯಾಘಾತದಿಂದ ಮನೆಯಲ್ಲಿಯೇ ಮೃತಪಟ್ಟಿದ್ದರು. ಇದರಿಂದ ಆಘಾತಗೊಂಡಿದ್ದ ಅವರ ಅಣ್ಣ ಸುಬ್ಬಣ್ಣ ಅವರು ಕೂಡಾ 7 ಗಂಟೆ ಸುಮಾರಿಗೆ ಹೃದಯಾಘಾತದಿಂದ ಹಾಲಾಡಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇವರಿಬ್ಬರು ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರೂ, ಅಕ್ಕ- ಪಕ್ಕದಲೇ ಮನೆಯಿತ್ತು.
ಗಿರಿಜಾ ಓರ್ವ ಪುತ್ರನನ್ನು ಅಗಲಿದ್ದಾರೆ. ಸುಬ್ಬಣ್ಣ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
Next Story