ಉಡುಪಿ ನಗರಸಭೆ ತ್ಯಾಜ್ಯ ಸಾಗಾಟದ ವಾಹನ ಪಲ್ಟಿ
ಮಣಿಪಾಲ, ಜು.28: ಉಡುಪಿ ನಗರಸಭೆಯ ತ್ಯಾಜ್ಯ ಸಾಗಾಟದ ವಾಹನವೊಂದು ಪಲ್ಟಿಯಾಗಿರುವ ಘಟನೆ ಇಂದು ಮಧ್ಯಾಹ್ನ ಅಲೆವೂರು ಪ್ರಗತಿನಗರದ ಡಂಪಿಂಗ್ ಯಾರ್ಡ್ ರಸ್ತೆಯಲ್ಲಿ ನಡೆದಿದೆ.
ತ್ಯಾಜ್ಯ ಸಂಗ್ರಹಿಸಿಕೊಂಡು ಅಲೆವೂರು ಪ್ರಗತಿನಗರದಲ್ಲಿರುವ ಡಂಪಿಂಗ್ ಯಾರ್ಡ್ಗೆ ಹೋಗುತ್ತಿದ್ದ ವಾಹನ ಪ್ರಗತಿನಗರದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿರಸ್ತೆಯ ಬದಿಗೆ ಪಲ್ಟಿಯಾಗಿ ಬಿತ್ತೆನ್ನಲಾಗಿದೆ. ವಾಹನದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಘಟನೆಯಿಂದ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
Next Story