ಸಾಧನ-ಸಲಕರಣೆ ವಿತರಣೆಗೆ ಪೋರ್ಟಲ್ ಆರಂಭ
ಮಂಗಳೂರು, ಜು.28: ಅಲಿಮ್ಕೋ ಸಂಸ್ಥೆಯು ಜಿಲ್ಲೆಯ 60 ವರ್ಷ ಹಾಗೂ ಮೇಲ್ಪಟ್ಟವರಿಗೆ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಸಾಧನ ಸಲಕರಣೆಗಳ ವಿತರಣೆ ಮಾಡುತ್ತಿದ್ದು, ನೋಂದಣಿಗೆ ಪೋರ್ಟಲ್ ಆರಂಭಿಸಲಾಗಿದೆ.
ಅವಶ್ಯಕತೆ ಇರುವ ಹಿರಿಯ ನಾಗರಿಕರು ನಮ್ಮ ಹತ್ತಿರದ ಜನಸೇವಾ ಕೇಂದ್ರಗಳಲ್ಲಿ ಅದಕ್ಕಾಗಿ ನೋಂದಣಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9448849923 ಅಥವಾ ಹಿರಿಯ ನಾಗರಿಕರ ಸಹಾಯವಾಣಿ: 1090, 0824-2421190, 6362929402ನ್ನು ಸಂಪರ್ಕಿ ಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story