ಉಳ್ಳಾಲ: ಯು.ಕೆ. ಹಸನ್ ಹಾಜಿ ನಿಧನ
ಉಳ್ಳಾಲ : ಕೋಟೆಪುರ ನಿವಾಸಿ ಯು.ಕೆ.ಹಸನ್ ಹಾಜಿ (88) ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮತ್ಸೋದ್ಯಮಿಯಾಗಿದ್ದ ಅವರು ಉಳ್ಳಾಲ ದರ್ಗಾದ ಸುದೀರ್ಘ ಅವಧಿಯ ಅಧ್ಯಕ್ಷರಾಗಿದ್ದ ಮರ್ಹೂಂ ಯು.ಕೆ.ಇಬ್ರಾಹಿಂ ಹಾಜಿಯವರ ಸಹೋದರ ಹಾಗೂ ಉಳ್ಳಾಲ ಫಿಶ್ ಮೀಲ್ ಆ್ಯಂಡ್ ಆಯಿಲ್ ಮ್ಯಾನುಫಾಕ್ಟರರ್ಸ್ ಅಸೋಸಿಯೇಶನ್ ಇದರ ಅಧ್ಯಕ್ಷರಾದ ಹೆಚ್.ಕೆ.ಖಾದರ್ ಅವರ ತಂದೆ.
ಮೃತರು ಮೂವರು ಪುತ್ರರು ಮತ್ತು 7 ಮಂದಿ ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಉಳ್ಳಾಲದ ಕೋಟೆಪುರ ಜುಮಾ ಮಸೀದಿಯ ವಠಾರದಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
Next Story