ಅಮಾಸೆಬೈಲು: ಕೋವಿಯೊಂದಿಗೆ ಬೇಟೆಯಾಡುತ್ತಿದ್ದ ನಾಲ್ವರ ಬಂಧನ
ಅಮಾಸೆಬೈಲು, ಜು.30: ಅರಣ್ಯ ಪ್ರದೇಶದಲ್ಲಿ ಕೋವಿ ಹಿಡಿದುಕೊಂಡು ಬೇಟೆಯಾಡುತ್ತಿದ್ದ ನಾಲ್ವರನ್ನು ಅಮಾಸೆಬೈಲು ಪೊಲೀಸರು ಜು.29ರಂದು ರಾತ್ರಿ ವೇಳೆ ಹೆಬ್ರಿ ತಾಲೂಕಿನ ಶೆಡಿ ಮನೆಗ್ರಾಮದ ಅರಸಮ್ಮನಕಾನು ತೋಟದ ಮನೆ ಎಂಬಲ್ಲಿ ಬಂಧಿಸಿದ್ದಾರೆ.
ಕಾರ್ಕಳದ ಸ್ಟಾನಿ ಸ್ಲೆವೀಸ್ ಪಾಯಸ್(50), ಕಾರ್ಕಳ ಆನೆಕೆರೆಯ ಮೋಹನ (46), ಕುಕ್ಕುಂದೂರು ಗ್ರಾಮದ ಮೇಲ್ವಿನ್ ಪ್ರಾಕ್ಸಿ ಡಿಸೋಜ(38), ಹೆಬ್ರಿ ಜೆಡ್ಡೋಳಿ ಅಕ್ಷಯ ಪೂಜಾರಿ(23) ಬಂಧಿತ ಆರೋಪಿಗಳು.
ಇವರು ಕೋವಿ ಹಿಡಿದು ಬೇಟೆಯಾಡುತ್ತಿದ್ದು, ಈ ವೇಳೆ ಬಂದೂಕಿನ ಗುಂಡಿನ ಶಬ್ದ ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ನಾಲ್ವರನ್ನು ಬಂಧಿಸಿ, ಡಿಬಿಬಿಎಲ್ ಬಂದೂಕು ಹಾಗೂ ಆರು ಸಜೀವ ಗುಂಡುಗಳು ಮತ್ತು ಕಾರನ್ನು ವಶಕ್ಕೆ ಪಡೆದುಕೊಂಡರು. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story