ಮಹಿಳೆಗೆ ಲಕ್ಷಾಂತರ ರೂ. ವಂಚನೆ: ದೂರು
ಉಡುಪಿ, ಆ.4: ಫಾರ್ಮಸಿ ತೆರೆಯುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ಹಣ ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರಪುರದ ಲಿನೆಟ್ ಸೀಮಾ ರೊಡ್ರಿಗಸ್(38) ಎಂಬವರು ಕುವೈತ್ ನಲ್ಲಿ ಉದ್ಯೋಗದಲ್ಲಿದ್ದು, ಮೇ 19ರಂದು ಇವರಿಗೆ ಫೇಸ್ಬುಕ್ ಮೂಲಕ ಡಾ.ಆ್ಯಂಡ್ರಿವ್ ಫೆಲಿಕ್ಸ್ ಎಂಬವರ ಪರಿಚಯ ಆಗಿತ್ತು. ಈತ ತಾನು ಡಾಕ್ಟರ್ ಆಗಿದ್ದು, ದೆಹಲಿಗೆ ಬಂದು ಫಾರ್ಮಸಿಯನ್ನು ತೆರೆಯುವುದಾಗಿ ಲಿನೆಟ್ ಅವರನ್ನು ನಂಬಿಸಿ ವಾಟ್ಸಪ್ನಲ್ಲಿ ಸಂಪರ್ಕ ಹೊಂದಿದ್ದರು.
ಹೀಗೆ ಆ್ಯಂಡ್ರಿವ್ ಹಂತ ಹಂತವಾಗಿ 19 ಲಕ್ಷ ರೂ. ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಲಿನೆಟ್ ಅವರಿಗೆ ಮೋಸ ಹಾಗೂ ನಂಬಿಕೆ ದ್ರೋಹ ಎಸಗಿರುವುದಾಗಿ ನ್ಯಾಯಾಲಯದ ಖಾಸಗಿ ದೂರಿನಂತೆ ಪ್ರಕರಣ ದಾಖಲಾಗಿದೆ.
Next Story