ಬಿಟಿಯಲ್ಲಿ ಉಚಿತ ಕಸೂತಿ ತರಬೇತಿಗೆ ಅರ್ಜಿ ಆಹ್ವಾನ
ಮಣಿಪಾಲ, ಆ.31: ಮಣಿಪಾಲದ ಶಿವಳ್ಳಿಯಲ್ಲಿರುವ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಸೆ.13ರಿಂದ ಒಂದು ವಾರ ಕಾಲ ಉಚಿತ ಕಸೂತಿ ಕಲೆ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತ ಮಹಿಳೆಯರು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬಹುದು.
ತರಬೇತಿಯ ಬಳಿಕ ಸ್ವ-ಉದ್ಯೋಗ ಮಾಡಲು ಅವಕಾಶವಿದೆ. ತರಬೇತಿ ವೇಳೆ ಅಭ್ಯರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆ ಇದೆ. ಆಸಕ್ತ ಅಭ್ಯರ್ಥಿ ಗಳು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ವಿದ್ಯಾರ್ಹತೆಯನ್ನು ಬಿಳಿ ಹಾಳೆಯಲ್ಲಿ ಬರೆದು ಸೆ.7ರೊಳಗೆ ಭಾರತೀಯ ವಿಕಾಸ ಟ್ರಸ್ಟ್, ‘ಅನಂತ’, ಪೆರಂಪಳ್ಳಿ, ಅಂಬಾಗಿಲು ರಸ್ತೆ, ಕುಂಜಿಬೆಟ್ಟು ಅಂಚೆ ಉಡುಪಿ - 576102, ಈ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ ಕೊಡಬಹುದು. ದೂರವಾಣಿ ಸಂಖ್ಯೆ: 0820-2570263/262ಕ್ಕೆ ಕರೆ ಮಾಡಿ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಬಹುದು ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
Next Story