ಪಡುಬಿದ್ರೆ : ಲಾರಿ ಢಿಕ್ಕಿ; ಐದು ವಾಹನಗಳು ಜಖಂ
ಪಡುಬಿದ್ರೆ : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ನಾಲ್ಕು ವಾಹನಗಳಿಗೆ ಢಿಕ್ಕಿಯಾದ ಪರಿಣಾಮ ಲಾರಿ ಸೇರಿ ಐದು ವಾಹನಗಳು ನಜ್ಜುಗುಜ್ಜಾದ ಘಟನೆ ಮಂಗಳವಾರ ಪಡುಬಿದ್ರೆ ಬಂಟರ ಭವನ ಬಳಿ ನಡೆದಿದೆ.
ಕೇರಳದಿಂದ ಉಡುಪಿ ಕಡೆಗೆ ಸರಕು ಹೊತ್ತು ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ರಾಷ್ಟ್ರೀಯ ಹೆದ್ದಾರಿ 66 ರ ಪಡುಬಿದ್ರಿಯ ಬಿರಿಯಾನಿ ಪ್ಯಾರಡೈಸ್ ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸಲಾದ ಒಂದು ಕಾರು, ಮೂರು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ವಾಹನಗಳು ಸಂಪೂರ್ಣ ಜಖಂಗೊಂಡಿದೆ. ದ್ವಿಚಕ್ರ ಸವಾರರು ಮತ್ತು ಕಾರು ಪ್ರಯಾಣಿಕರು ಹೊಟೇಲ್ ಒಳಗಡೆ ಇದ್ದರು. ಇದರಿಂದ ಭಾರೀ ಅನಾಹುತ ತಪ್ಪಿದೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story