ಬಾವಿಗೆ ಬಿದ್ದು ಮಹಿಳೆ ಮೃತ್ಯು
ಕೊಲ್ಲೂರು, ಸೆ.3: ನೀರು ಸೇದುವಾಗ ಅಕಸ್ಮಿಕವಾಗಿ ಬಾವಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಡೂರು ಕುಂಜ್ಞಾಡಿ ಗ್ರಾಮದ ಹುಡೊಂಣ್ಕಿ ಎಂಬಲ್ಲಿ ಸೆ.2ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಗಿರಿಜಾ (35) ಎಂದು ಗುರುತಿಸಲಾಗಿದೆ. ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಇವರು ಮನೆಯ ಎದುರುಗಡೆ ಇರುವ ಬಾವಿ ಯಿಂದ ನೀರು ಸೇದುತ್ತಿರುವಾಗ ಆವರಣಕ್ಕೆ ಹಾಕಿದ ದಂಡಿಗೆ ಮುರಿದು ಕಾಲು ಜಾರಿ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story