ಕೈಕಂಬ: ಮಸೂದ್ ಕಾಲೇಜು ಆಫ್ ಫಿಸಿಯೋಥೆರಪಿ ವತಿಯಿಂದ ಉಚಿತ ಫಿಸಿಯೋಥೆರಪಿ ಶಿಬಿರ
ಕೈಕಂಬ: ವಿಶ್ವ ಫಿಸಿಯೋಥೆರಪಿ ದಿನಾಚರಣೆಯ ಅಂಗವಾಗಿ ಮಸೂದ್ ಕಾಲೇಜ್ ಆಫ್ ಫಿಸಿಯೋಥೆರಪಿ ವತಿಯಿಂದ ನಮ್ಮ ನಾಡ ಒಕ್ಕೂಟದ ಸಹಭಾಗಿತ್ವದಲ್ಲಿ ಮೆಡಿಕಲ್ ವೆಲ್ಫೇರ್ ಟ್ರಸ್ಟ್ ಕೈಕಂಬ ಇವರ ಸಹಕಾರದಲ್ಲಿ ಉಚಿತ ಫಿಸಿಯೋಥೆರಪಿ ಶಿಬಿರವು ಕೈಕಂಬದ ಮೆಗಾ ಫ್ಲಾಝಾ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟದ ಕೇಂದ್ರ ಸಮಿತಿಯ ಕೋಶಾಧಿಕಾರಿ ಅಬ್ದುಲ್ ಹಮೀದ್ ಮೂಡುಬಿದಿರೆ, ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿ, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬುಲ್ ಆಲಾ ಪುತ್ತಿಗೆ, ಬಂಟ್ವಾಳ ತಾಲೂಕು ಅಧ್ಯಕ್ಷ ಪಿಎ ರಹೀಂ ಬಿಸಿರೋಡು, ಮೆಗಾ ಫ್ಲಾಝಾ ಮಾಲಕ ಅಬ್ದುಲ್ ಅಝೀಝ್, ಮೆಡಿಕಲ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಝಕರಿಯಾ ಬಾಜಿ, ಮಸೂದ್ ಕಾಲೇಜು ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲೆ ಡಾ. ಅನೀಶಾ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೆಗಾ ಪ್ಲಾಝಾ ಹಾಲ್ ನ ಮಾಲಕ ಅಬ್ದುಲ್ ಅಝೀಝ್ ಕೈಕಂಬ, ಮೆಡಿಕಲ್ ವೆಲ್ಫೇರ್ ಟ್ರಸ್ಟ್ ಕೈಕಂಬ ಇದರ ಅಧ್ಯಕ್ಷ ಝಕರಿಯ ಬಾಜಿ ಮತ್ತು ಮಸೂದ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲೆ ಡಾ. ಅನೀಶಾ ಅವರನ್ನು ಸನ್ಮಾನಿಸಲಾಯಿತು.
ಮೌಲಾನಾ ಅನ್ಸಾರ್ ಕಿರಾಅತ್ ಪಠಿಸಿದರು. ನಮ್ಮ ನಾಡು ಒಕ್ಕೂಟ ಮಂಗಳೂರು ತಾಲೂಕಿನ ಅಧ್ಯಕ್ಷ ಅಬ್ದುಲ್ ರಾಝಿಕ್ ಅಲಿ ಪ್ರಸ್ತಾವನೆಗೈದರು. ಮಸೂದ್ ಕಾಲೇಜು ಆಪ್ ಫಿಸಿಯೋಥೆರಪಿಯ ಉಪನ್ಯಾಸಕಿ ಡಾ. ಮೇಘನಾ ಶಿಬಿರದ ಧ್ಯೇಯೋದ್ದೇಶಗಳ ಬಗ್ಗೆ ಮಾತನಾಡಿದರು.
ಮಸೂದ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಡಾ. ಆರಿಫ್ ಮಸೂದ್ ವಂದಿಸಿದರು. ನಮ್ಮ ನಾಡು ಒಕ್ಕೂಟ ಮಂಗಳೂರು ತಾಲೂಕಿನ ಕಾರ್ಯದರ್ಶಿ ರಫೀಕ್ ಮಾಸ್ಟರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.