ಬೆಳ್ತಂಗಡಿ : ಅತ್ಯಾಚಾರ, ಕೊಲೆ ಖಂಡಿಸಿ ಎಸ್ಡಿಪಿಐ ಪ್ರತಿಭಟನೆ
ಬೆಳ್ತಂಗಡಿ : ಮಹಿಳಾ ಅಧಿಕಾರಿ ಸಾಬಿಯಾ ಸೈಫಿ ಅತ್ಯಾಚಾರ ಮತ್ತು ಬರ್ಬರ ಹತ್ಯಾ ಕೃತ್ಯವನ್ನು ಖಂಡಿಸಿ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನಸೌಧ ಎದುರುಗಡೆ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ವಿಧಾನ ಸಭಾಧ್ಯಕ್ಷರಾದ ಹೈದರ್ ನೀರ್ಸಾಲ್ ವಹಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ನಿಝಾಮ್ ಗೇರುಕಟ್ಟೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿಎಫ್ಐ ಬೆಳ್ತಂಗಡಿ ಇದರ ಅಧ್ಯಕ್ಷರಾದ ಮುಸ್ತಫಾ ಜಿ.ಕೆ, ಎಸ್ಡಿಪಿಐ ಸಮಿತಿ ಸದಸ್ಯರಾದ ಅಶ್ಫಕ್ ಪುಂಜಲ್ ಕಟ್ಟೆ, ಸಾಲಿ ಮದ್ದಡ್ಕ, ಸಾದಿಕ್ ಲಾಯಿಲಾ, ಫಝಲ್ ಉಜಿರೆ, ಜನ ಪ್ರತಿನಿಧಿ ಗಳಾದ ರಿಯಾಝ್ ಮದ್ದಡ್ಕ, ಸಿದ್ದೀಕ್ ಚಾರ್ಮಾಡಿ, ಕಬೀರ್ ಕಾಜೂರು ಸಲೀಂ ಕುಂಟಿನಿ ,ಸಮಾ ಅಲಿ,ವುಮೆನ್ ಇಂಡಿಯಾ ಇದರ ಜಿಲ್ಲಾ ಉಪಾಧ್ಯಕ್ಷರಾದ ಮರಿಯಮ್ಮ ಟಿ,ಎಸ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಕ್ಬರ್ ಸ್ವಾಗತಿಸಿ, ಅಶ್ರಪ್ ಚಾರ್ಮಾಡಿ ವಂದಿಸಿದರು.
Next Story