ಫಸ್ಟ್ ಕರ್ನಾಟಕ ಮೈಸೂರು ಡಿವಿಜನ್ ಅಧ್ಯಕ್ಷರಾಗಿ ಶೇಖ್ ರಹ್ಮತುಲ್ಲಾ ಆಯ್ಕೆ
ಶೇಖ್ ರಹ್ಮತುಲ್ಲಾ
ಬಿ.ಸಿ.ರೋಡ್, ಸೆ.11: ಫೆಡರೇಷನ್ ಆಫ್ ಇಂಡಿಪೆಂಡೆಂಟ್ ರೆಕಾಗ್ನೈಝ್ಡ್ ಸ್ಕೂಲ್ಸ್ ಟ್ರಸ್ಟ್ (ಫಸ್ಟ್), ಕರ್ನಾಟಕ ಇದರ ಮೈಸೂರು ವಿಭಾಗದ ಅಧ್ಯಕ್ಷರಾಗಿ ಕಲಾಬಾಗಿಲು ರಝಾ ನಗರದ ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಸಂಸ್ಥಾಪಕ ಶೇಖ್ ರಹ್ಮತುಲ್ಲಾ ಆಯ್ಕೆಗೊಂಡಿದ್ದಾರೆ.
ಚಾಮರಾಜನಗರ, ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಸಹಿತ ಒಟ್ಟು 8 ಜಿಲ್ಲೆಗಳನ್ನೊಳಗೊಂಡ ಮೈಸೂರು ಡಿವಿಜನ್ ಗೆ ಈ ಆಯ್ಕೆ ನಡೆದಿದ್ದು, ರಾಜ್ಯದ ಫಸ್ಟ್ ಕರ್ನಾಟಕದ ಸ್ಥಾಪಕಾಧ್ಯಕ್ಷ ನೀಲಪ್ಪ ಎಚ್. ಮುಕ್ಕಣ್ಣವರ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕೋಟಿಗೆ ರವರ ನೇತೃತ್ವ ಮತ್ತು ಮುತುವರ್ಜಿಯಲ್ಲಿ ಶೇಖ್ ರಹ್ಮತ್ತುಲ್ಲಾ ಆಯ್ಕೆಗೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಫಸ್ಟ್ ಕರ್ನಾಟಕ ಫೆಡರೇಶನ್ ರಾಜ್ಯಮಟ್ಟದ ಖಾಸಗಿ ಶಾಲಾ ಒಕ್ಕೂಟವಾಗಿದ್ದು ಶೇಖ್ ರಹ್ಮತ್ತುಲ್ಲಾ ಇದರ ಸ್ಥಾಪಕ ಉಪಾಧ್ಯಾಕ್ಷರಾಗಿದ್ದಾರೆ. ಬಂಟ್ವಾಳ ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ಪದಾಧಿಕಾರಿಯಾಗಿ ಹಾಗೂ ಇನ್ನಿತರ ಅನೇಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.