ಸೆ.20ಕ್ಕೆ ಹಳೆಯ ವಾಹನಗಳ ಹರಾಜು
ಮಂಗಳೂರು, ಸೆ.18: ನ್ಯಾಯಾಲಯದ ಆದೇಶದಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟ ಏಳು ಹಳೆಯ ವಾಹನಗಳನ್ನು ಸೆ.20ರಂದು ಬೆಳಗ್ಗೆ 11ಕ್ಕೆ ಕಂಕನಾಡಿ ನಗರ ಪೊಲೀಸ್ ಠಾಣಾ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುತ್ತಿದೆ.
ವಾಹನಗಳ ವಿವರ: ಹೋಂಡಾ ಕಂಪೆನಿಯ ಕಪ್ಪು ಬಣ್ಣದ ಡಿಯೋ ಸ್ಕೂಟರ್, ಹೋಂಡಾದ ಕಾಪರ್ ರೆಡ್ ಬಣ್ಣದ ಹೋರ್ನೆಟ್ ಮೋಟರು ಸೈಕಲ್, ಬಜಾಜ್ ಕಂಪೆನಿಯ ನೀಲಿ ಬಣ್ಣದ ಪ್ಲಾಟಿನಾ ಮೋಟಾರು ಸೈಕಲ್, ಬಜಾಜ್ ಕಂಪೆನಿಯ ಕಪ್ಪು ಬಣ್ಣದ ಪ್ಲಾಟಿನಾ ಮೋಟಾರು ಸೈಕಲ್, ಬಜಾಜ್ ಕಂಪೆನಿಯ ಕಪ್ಪು ಬಣ್ಣದ ಪಲ್ಸರ್ ಮೋಟಾರು ಸೈಕಲ್, ಸುಝಕಿ ಕಂಪೆನಿಯ ಕಪ್ಪು ಬಣ್ಣದ ಆಕ್ಸೆಸ್ ಸ್ಕೂಟರ್ ಹಾಗೂ ಮಾರುತಿ ಕಂಪೆನಿಯ ಬಿಳಿ ಬಣ್ಣದ ಝೆನ್ ಕಾರು ಹರಾಜಿಗಿದೆ ಎಂದು ಕಂಕನಾಡಿ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story