ದ.ಕ. ಜಿಲ್ಲೆ : ಕೋವಿಡ್ಗೆ ಓರ್ವ ಬಲಿ; 97 ಮಂದಿಗೆ ಸೋಂಕು
ಮಂಗಳೂರು, ಸೆ.19: ದ.ಕ. ಜಿಲ್ಲೆಯಲ್ಲಿ ಕೋವಿಡ್ನಿಂದಾಗಿ ಓರ್ವ ಮೃತಪಟ್ಟಿದ್ದು, 97 ಮಂದಿಗೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಶೇ.0.96ಗೆ ಪಾಸಿಟಿವಿಟಿ ದರ ಇಳಿಕೆಯಾಗಿದೆ. 160 ಮಂದಿ ಕೊರೋನದಿಂದ ಮುಕ್ತರಾಗಿದ್ದಾರೆ. 1,13,190 ಸೋಂಕಿತರ ಪೈಕಿ 1,10,359 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ಗೆ ಇಲ್ಲಿಯವರೆಗೆ 1631 ಮಂದಿ ಮೃತಪಟ್ಟಿದ್ದು, 1200 ಸಕ್ರಿಯ ಪ್ರಕರಣಗಳಿವೆ ಎಂದು ಪ್ರಕಟನೆ ತಿಳಿಸಿದೆ.
Next Story