ಮಂಗಳೂರು: ‘ಇಲೈಟ್ ಇನ್ಫ್ರಾ ಸೊಲ್ಯೂಷನ್ಸ್’ ಮಳಿಗೆ ಶುಭಾರಂಭ
ಮಂಗಳೂರು, ಸೆ. 20: ರಿಯಲ್ ಎಸ್ಟೇಟ್, ಕನ್ಸ್ಟ್ರಕ್ಷನ್ಸ್, ಇಂಟೆರಿಯರ್ ಡಿಸೈನಿಂಗ್ ಸಹಿತ ವಿವಿಧ ಸೇವೆಗಳನ್ನು ನೀಡುವ ‘ಇಲೈಟ್ ಇನ್ಫ್ರಾ ಸೊಲ್ಯೂಷನ್ಸ್’ನ ನೂತನ ಮಳಿಗೆಯು ನಗರದ ಕಂಕನಾಡಿ ಬೈಪಾಸ್ ರಸ್ತೆಯ ಜೆಪಿ ಲೈಟಿಂಗ್ಸ್ ಕಟ್ಟಡದಲ್ಲಿ ಸೋಮವಾರ ಶುಭಾರಂಭಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಬಿ-ಹ್ಯೂಮನ್ ಫೌಂಡೇಶನ್ನ ಸ್ಥಾಪಕ ಅಧ್ಯಕ್ಷ ಆಸಿಫ್ ಡೀಲ್ಸ್, ಮುನ್ನೂರು ಗ್ರಾಪಂ ಸದಸ್ಯ ಅಬ್ದುಲ್ ಅಝೀಝ್, ವೆಲ್ನೆಸ್ ಹೆಲ್ಪ್ಲೈನ್ ಅಧ್ಯಕ್ಷ ಝಿಯಾ ಅಹ್ಮದ್, ಹಿದಾಯ ಫೌಂಡೇಶನ್ ಅಧ್ಯಕ್ಷ ಮನ್ಸೂರ್ ಅಝಾದ್, ನ್ಯಾಯವಾದಿ ಝೀಶಾನ್, ಎಸ್ಡಿಪಿಐ ರಾಜ್ಯ ಸದಸ್ಯ ರಿಯಾಝ್ ಫರಂಗಿಪೇಟೆ, ಮನಪಾ ಸ್ಥಳೀಯ ಕಾರ್ಪೊರೇಟರ್ ನವೀನ್ ಡಿಸೋಜ, ದ.ಕ. ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಎಸ್. ಅತ್ತಾವರ, ಎನ್ಎಸ್ಯುಐ ಉಳ್ಳಾಲ ಕ್ಷೇತ್ರದ ಅಧ್ಯಕ್ಷ ಅಹ್ನಾಫ್ ಅಹ್ಮದ್ (ಡೀಲ್ಸ್), ಕಲಾವಿದ ಅಥರ್ವ, ಇದಿನಬ್ಬ ಫೌಂಡೇಶನ್ನ ಸಲೀಮ್ ಸಾಗರ, ಎಎ ಟ್ರೇಡರ್ಸ್ ಸ್ಥಾಪಕ ನಿರ್ದೇಶಕ ಅಸ್ಕನ್ ಶೇಖ್, ಉದ್ಯಮಿ ರಾಜೇಶ್ ಶೆಟ್ಟಿ, ಇದಿನಬ್ಬ ಫೌಂಡೇಶನ್ನ ಫರ್ವೇಝ್, ಫಾಝಿಲ್ಸ್ ಕ್ರಿಯೇಶನ್ ಸಿಇಒ ಮೂಸಾ ಫಾಝಿಲ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಲಕರಾದ ಇಮ್ರಾನ್ ಕೈಕಂಬ, ಅಫ್ರಿದ್ ಉಳ್ಳಾಲ ಹಾಗೂ ಸಾಹಿಲ್ ಉಳ್ಳಾಲ, ರಾಹಿಲ್ ಉಳ್ಳಾಲ, ರಿಹಾನ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.