ಬೆಳ್ತಂಗಡಿ : ಗಾಂಜಾ ಸಾಗಾಟ; ಆರೋಪಿ ಸೆರೆ
ಬೆಳ್ತಂಗಡಿ : ಗಾಂಜಾ ಸಾಗಾಟ ಮಾಡುತಿದ್ದ ಪ್ರಕರಣವೊಂದನ್ನು ಬೆಳ್ತಂಗಡಿ ಪೊಲೀಸರು ಸೋಮವಾರ ಪತ್ತೆ ಹಚ್ಚಿದ್ದು ಓರ್ವನನ್ನು ಬಂಧಿಸಿ ಸುಮಾರು ಎರಡು ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ಇಳಂತಿಲ ಗ್ರಾಮದ ನಿವಾಸಿ ಮುಹಮ್ಮದ್ ಶಾಫಿ (29) ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ಪಿಎಸ್ಐ ನಂದಕುಮಾರ್ ನೇತೃತ್ವದ ತಂಡ ಕಳಿಯ ಗ್ರಾಮದ ಪರಪ್ಪು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಬೈಕ್ ತಡೆದು ಪರಿಶೀಲಿಸಿದ್ದು, ಈ ವೇಳೆ ಗಾಂಜಾ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಅವರ ನೇತೃತ್ವದಲ್ಲಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಬೆಳ್ತಂಗಡಿಯಲ್ಲಿ ಕೆಲ ದಿನಗಳ ಹಿಂದೆಯಷ್ಟೆ ಗಾಂಜಾ ಸಾಗಾಟದ ಪ್ರಕರಣವೊಂದು ಪತ್ತೆಯಾಗಿ ಇಬ್ಬರನ್ನು ಬಂಧಿಸಲಾಗಿತ್ತು.
Next Story