ಸೆ.22ರಂದು ದ.ಕ. ಜಿಲ್ಲೆಯಲ್ಲಿ ಲಸಿಕಾ ಮೇಳ
ಮಂಗಳೂರು, ಸೆ. 21: ದ.ಕ. ಜಿಲ್ಲೆಯಾದ್ಯಂತ ಸೆ.22ರಂದು ಕೋವಿಡ್ ಲಸಿಕಾ ಮೇಳ ಜರುಗಲಿದ್ದು, ಈ ಬಾರಿ ಜಿಲ್ಲೆಗೆ 75,000 ಡೋಸ್ ಗುರಿ ನೀಡಲಾಗಿದೆ.
ಜಿಲ್ಲೆಯ ಎಲ್ಲ ತಾಲೂಕುಗಳ, ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಈ ಲಸಿಕಾ ಅಭಿಯಾನ ನಡೆಯಲಿದೆ. ಇದರಲ್ಲಿ ಕೋವಿಶೀಲ್ಡ್ ಪ್ರಥಮ ಹಾಗೂ ಎರಡನೇ ಡೋಸ್ ಲಸಿಕೆಯನ್ನು ಎಲ್ಲೆಡೆ ನೀಡಲಾಗುವುದು. ಕೊವ್ಯಾಕ್ಸಿನ್ ಲಸಿಕೆ ಆಯ್ದ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರ ಲಭ್ಯವಿರುವುದು.
ಲಸಿಕೆ ಪಡೆಯಲು ಬಾಕಿ ಇರುವ 18 ವರ್ಷ ಮೇಲ್ಪಟ್ಟ ಎಲ್ಲ ಫಲಾನುಭವಿಗಳು ಹಾಗೂ ಎರಡನೇ ಡೋಸ್ ಪಡೆಯಲು 84 ದಿನ ಪೂರೈಸಿದ ಎಲ್ಲ ಲಸಿಕಾ ಫಲಾನುಭವಿಗಳು ಈ ಶಿಬಿರದ ಪ್ರಯೋಜನವನ್ನು ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story