ಸೆ.25ರಂದು ಮಂಗಳೂರು ವಿವಿ, ಬಿಐಟಿ, ಬೀಡ್ಸ್ ನಿಂದ 'ಗ್ರೀನ್ ವಾಕಥಾನ್ 2021'
ಮಂಗಳೂರು: ಮಂಗಳೂರು ವಿಶ್ವ ವಿದ್ಯಾಲಯ, ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ( ಬಿಐಟಿ ) ಹಾಗು ಬ್ಯಾರೀಸ್ ಎನ್ವಿರೋ ಅರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ( ಬೀಡ್ಸ್) ಗಳು ವಿಶ್ವ ಹಸಿರು ಕಟ್ಟಡ ಸಪ್ತಾಹದ ಪ್ರಯುಕ್ತ ಸೆ.25 ರಂದು 'ಗ್ರೀನ್ ವಾಕಥಾನ್' ಕಾರ್ಯಕ್ರಮ ಹಮ್ಮಿಕೊಂಡಿವೆ. ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಿಂದ ಬಿಐಟಿ ಕ್ಯಾಂಪಸ್ ವರೆಗೆ ಈ ವಾಕಥಾನ್ ನಡೆಯಲಿದೆ.
ಮಂಗಳೂರು ವಿಶ್ವವಿಧ್ಯಾನಿಲಯದ ಉಪಕುಲಪತಿ ಡಾ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬೆಳಗ್ಗೆ 7:00 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಿಂದ ವಾಕಥಾನ್ ಆರಂಭವಾಗಿ ಸಮಾರೋಪ ಬಿಐಟಿ ಕ್ಯಾಂಪಸ್ನಲ್ಲಿ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ಸಸಿ (ಗಿಡ) ನೆಡುವುದರೊಂದಿಗೆ ಸಮಾರೋಪಗೊಳ್ಳಲಿದೆ .
ಈ ಕಾರ್ಯಕ್ರಮದ ಉದ್ದೇಶವು ಸುಸ್ಥಿರ ಅಭಿವೃದ್ಧಿ, ಇಂಧನ ಉಳಿತಾಯ, ಮರುಬಳಕೆ ಮತ್ತು ಸ್ವಚ್ಛ ಹಾಗೂ ಹಸಿರು ನಗರವನ್ನು ಉತ್ತೇಜಿಸುವ ಮೂಲಕ ಜಾಗೃತಿ ಮೂಡಿಸುವುದು. ಬಿಐಟಿ ಮತ್ತು ಬೀಡ್ಸ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲರನ್ನು ಆಹ್ವಾನಿಸುತ್ತದೆ ಎಂದು ಬಿಐಟಿ ಪ್ರಾಂಶುಪಾಲ
ಡಾ.ಎಸ್.ಐ. ಮಂಜೂರ್ ಬಾಷಾ, ಬೀಡ್ಸ್ ಪ್ರಾಂಶುಪಾಲ ಅಶೋಕ್ ಎಲ್ ಪಿ ಮೆಂಡೋನ್ಕಾ, ಬಿಐಟಿ-ಪಾಲಿಟೆಕ್ನಿಕ್ ಪ್ರಾಂಶುಪಾಲ, ಡಾ. ಅಜೀಜ್ ಮುಸ್ತಫಾ, ಬಿಐಟಿ ಇಸಿಇ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.