ಮಲ್ಪೆ, ಅ.10: ಮಲ್ಪೆ ಬಾಪುತೋಟ ಪಡುಕೆರೆ ರಸ್ತೆ ಬದಿಯಲ್ಲಿ ಅ.3ರಂದು ರಾತ್ರಿಯಿಂದ ಅ.6ರ ಬೆಳಗ್ಗಿನ ಮಧ್ಯಾವಧಿಯಲ್ಲಿ ಸಾಸ್ತಾನ ಕೋಡಿಕನ್ಯಾನದ ದಿನೇಶ ಮೋಗವೀರ ಎಂಬವರು ನಿಲ್ಲಿಸಿದ್ದ 25 ಸಾವಿರ ರೂ. ಮೌಲ್ಯದ ಕೆಎ20 ಇಜಿ 9301ನೆ ನಂಬರಿನ ಬೈಕ್ ಕಳವಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.