ಭಟ್ಕಳ : ಪದವಿ ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ
ಭಟ್ಕಳ : ಭಟ್ಕಳ ಅಂಜುಮನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಆ್ಯಂಡ್ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಬಿಸಿಎ ಮತ್ತು ಬಿಬಿಎ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.
2019ರಲ್ಲಿ ವಿಶ್ವವಿದ್ಯಾಲಯದಲ್ಲಿ ಫರ್ಝಿನ್ ಖಾದ್ರಿ ಮೂರನೇ ರ್ಯಾಂಕ್ ಪಡೆದು ಎರಡು ಚಿನ್ನದ ಪದಕ ಗಳಿಸಿದ್ದಾರೆ. ಅವರು ಬಿಬಿಎ ಮಾರ್ಕೆಟಿಂಗ್ ವಿಷಯದಲ್ಲಿ ಶೇಕಡಾ ನೂರರಷ್ಟು ಅಂಕ ಗಳಿಸಿದ್ದಾರೆ. ಅಂಜುಮನ್ ಕಾಲೇಜಿನ ಇನ್ನೋರ್ವ ವಿದ್ಯಾರ್ಥಿನಿ ಬಿಬಿ ಆಯಿಷಾ ಪಿರ್ಜಾದೆ ಅವರು ಬಿಬಿಎ ಮಾರ್ಕೆಟ್ ವಿಷಯದಲ್ಲಿ ನೂರರಷ್ಟು ಅಂಕ ಪಡೆದು ಚಿನ್ನದ ಪದಕ ಪಡೆದಿದ್ದಾರೆ.
ಫರ್ಝಿನ್ ಖಾದ್ರಿ ಅವರು ಅಂಜುಮನ್ ಇನ್ಸ್ ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಆ್ಯಂಡ್ ಮ್ಯಾನೆಜ್ಮೆಂಟ್ ಸಂಸ್ಥೆಯಲ್ಲಿ ಎಂಬಿಎ ಪೂರ್ಣಗೊಳಿಸಿ ಅಂಜುಮಾನ್ ಗರ್ಲ್ಸ್ ಇಂಗ್ಲೀಷ್ ಮಿಡಿಯಂ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಬಿ ಆಯಿಷಾ ಅವರು ಸದ್ಯ ಎಂಬಿಎ ಓದುತ್ತಿದ್ದಾರೆ. ಇಂದು ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಕ ಪ್ರಧಾನ ಮಾಡಲಾಯಿತು.
ಅವರ ಸಾಧನೆಗೆ ಅಂಜುಮಾನ್ ಸಂಸ್ಥೆ ಅಧ್ಯಕ್ಷರಾದ ಖಾಜಿಯಾ ಮುಜಾಮಿಲ್, ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಇಸ್ಮಾಯಿಲ್ ಹಾಗೂ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕ ವೃಂದ, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.