ಅ.17ರಂದು ಕೇಂದ್ರ ಮೀುಗಾರಿಕಾ ಸಚಿವರು ಮಲ್ಪೆಗೆ
ಉಡುಪಿ, ಅ.16: ಕೇಂದ್ರದ ವಾರ್ತಾ ಮತ್ತು ಪ್ರಚಾರ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆಯ ರಾಜ್ಯ ಸಚಿವ ಡಾ.ಎಲ್. ಮುರುಗನ್ ಅವರು ಅ.17ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ರವಿವಾರ ಅಪರಾಹ್ನ 3:45ಕ್ಕೆ ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡುವರು.
ಸಂಜೆ 5 ಗಂಟೆಗೆ ಮೀನುಗಾರರರೊಂದಿಗೆ ಸಂವಾದ ನಡೆಸುವ ಅವರು ರಾತ್ರಿ 8 ಗಂಟೆಗೆ ಮೀನುಗಾರರೊಂದಿಗೆ ಭೋಜನ ಸ್ವೀಕರಿಸಿ, ಬಳಿಕ ಉಡುಪಿಯಲ್ಲಿ ವಾಸ್ತವ್ಯ ಮಾಡುವರು. ಅ.18ರಂದು ಬೆಳಗ್ಗೆ 9 ಗಂಟೆಗೆ ಮಂಗಳೂರಿಗೆ ತೆರಳುವರು.
Next Story