ಬಂದ್ಯೋಡು: ಗಾಂಜಾ, ಎಂಡಿಎಂಎ ಸಹಿತ ಓರ್ವ ಆರೋಪಿಯ ಬಂಧನ
ಕಾಸರಗೋಡು, ಅ.19: ಗಾಂಜಾ ಹಾಗೂ ಎಂಡಿಎಂಎ ಮಾದಕ ವಸ್ತು ಸಹಿತ ಓರ್ವನನ್ನು ಕಾಸರಗೋಡು ಅಬಕಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.
ಕುಬಣೂರು ನಿವಾಸಿ ಅಬ್ದುಲ್ ಅಮೀರ್ (35) ಬಂಧಿತ ಆರೋಪಿಯಾಗಿದ್ದಾನೆ.
ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಬಂದ್ಯೋಡು ಮುಟ್ಟಂ ಸಮೀಪ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಲಾಗಿದೆ. ಬಂಧಿತನಿಂದ 347 ಗ್ರಾಂ ಎಂಡಿಎಂಎ ಮಾದಕ ವಸ್ತು ಮತ್ತು ಹತ್ತು ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ದಳದ ಪ್ರಕಟನೆ ತಿಳಿಸಿದೆ.
Next Story