ಮಂಗಳೂರು: ಫ್ಲ್ಯಾಟ್ ಮಾರಾಟ ಮಾಡಿ ಲಕ್ಷಾಂತರ ರೂ. ವಂಚನೆ; ದೂರು ದಾಖಲು
ಮಂಗಳೂರು, ಅ.21: ಫ್ಲ್ಯಾಟ್ ಮಾರಾಟ ಮಾಡಿ ಇಬ್ಬರು ಆರೋಪಿಗಳು ವಂಚನೆ ಮಾಡಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೆಸಿಲ್ಲಾ ಡಿಸೋಜ ಎಂಬವರು 2016ರಲ್ಲಿ ಪ್ರಶಾಂತ್ ರಸ್ಕಿನಾ ಮತ್ತು ಜೋಯ್ಸಿ ರಸ್ಕಿನಾ ಎಂಬವರ ವಸತಿಗೃಹ ಕಟ್ಟಡದಲ್ಲಿ 250ಚದರ ಅಡಿ ಮತ್ತು 710 ಚದರ ಅಡಿ ಫ್ಲಾಟ್ ಖರೀದಿಸಲು 32ಲಕ್ಷ ರೂ. ಹಣ ಪಾವತಿಸಿದ್ದರು. ಇದರಲ್ಲಿ 250ಚದರ ಅಡಿ ಪ್ರೆಸಿಲ್ಲಾ ಅವರ ಹೆಸರಿಗೆ ನೋಂದಣಿಯಾಗಿದ್ದು, ಇನ್ನೊಂದು ಫ್ಲಾಟ್ನ್ನು ಆರೋಪಿಗಳಾದ ಪ್ರಶಾಂತ್ ಮತ್ತು ಜ್ಯೋಯ್ಸೋ ರಸ್ಕಿನಾ ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ಮಂಗಳೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story