ರಾಮಕೃಷ್ಣ ಕಿಣಿಗೆ ಪಿಎಚ್ಡಿ ಪದವಿ
ಉಡುಪಿ, ಅ.23: ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇನ್ಸ್ಟ್ರಮೆಂಟೇಷನ್ ಆಂಡ್ ಕಂಟ್ರೋಲ್ ಇಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಪ್ರೊ. ಆಗಿರುವ ಕೆ.ರಾಮಕೃಷ್ಣ ಕಿಣಿ ಮಂಡಿಸಿದ ಮಲ್ಟಿವೇರಿಯೆಟ್ ಪ್ರೊಸೆಸ್ ಮಾನಿಟರಿಂಗ್ ಯೂಸಿಂಗ್ ಮಲ್ಟಿಸ್ಕೇಲ್ ವರ್ಷನ್ ಆಫ್ ಐಸಿಎ ಎಂಬ ಸಂಶೋಧನ ಪ್ರಬಂಧ್ಕೆ ಮಾಹೆ ಸಂಸ್ಥೆಯು ಪಿಎಚ್ಡಿ ನೀಡಿದೆ.
ಇವರು ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ(ಡಾ).ಮುದ್ದು ಮದಕಯಾರು ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಇವರು ಕಲ್ಯಾಣಪುರ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಅನಂತ ಪದ್ಮನಾಭ ಕಿಣಿ ಹಾಗೂ ಅಹಲ್ಯ ಕಿಣಿ ದಂಪತಿ ಪುತ್ರ.
Next Story