ಮಲ್ಪೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು
ಮಲ್ಪೆ, ಅ. 24: ಮಲ್ಪೆಯ ವಢಬಾಂಡೇಶ್ವರ ದೇವಸ್ಥಾನದ ಬಳಿಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಹಾಗೂ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಒಬ್ಬಂಟಿಯಾಗಿ ವಾಸ ಮಾಡಿಕೊಂಡಿದ್ದ ಜಯಲಕ್ಷ್ಮೀ ಅ.16ರಂದು ಮನೆಗೆ ಬೀಗ ಹಾಕಿ ಬೆಂಗಳೂರಿನ ಮಗನ ಮನೆಗೆ ಹೋಗಿದ್ದರು. ಅ.23ರಂದು ಜಯಲಕ್ಷ್ಮೀ ತಂಗಿ ಮನೆಗೆ ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಮುಖ್ಯದ್ವಾರದ ಚಿಲಕದ ಸ್ಕ್ರೂ ತೆಗೆದು ಒಳಗೆ ನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ಒಟ್ಟು 5,61,600 ರೂ. ಮೌಲ್ಯದ ಮುತ್ತಿನ ಸರ, ಒಂದು ಜೊತೆ ಕೆಂಪು ಕಲ್ಲು ಬಳೆ, ಎರಡು ಎಳೆ ಚಿನ್ನದ ಸರ, ಒಂದು ಎಳೆ ಚೈನ್, ಕಾಸು ಮಾಲೆ ನೆಕ್ಲೇಸ್, ಎರಡು ಉಂಗುರ, 90 ಸಾವಿರ ರೂ. ಮೌಲ್ಯದ 2 ಕೆ.ಜಿ. ಬೆಳ್ಳಿಯ ಸಾಮಾಗ್ರಿ, 70,000 ರೂ. ನಗದು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 7,21,600ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story