ಕಾರಿನ ಗಾಜು ಹೊಡೆದು ಸೊತ್ತು ಕಳವು
ಉಡುಪಿ, ಅ.24: ಕಾರಿನ ಗಾಜು ಹೊಡೆದು ಅದರೊಳಗೆ ಇದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಅ.23ರಂದು ರಾತ್ರಿ ವೇಳೆ ಉಡುಪಿ ನಗರದ ಕಿದಿಯೂರು ಹೊಟೇಲ್ ಸಮೀಪ ನಡೆದಿದೆ.
ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯ ಉದ್ಯೋಗಿ ಹಾಗೂ ಸಂತೆಕಟ್ಟೆ ನಿವಾಸಿ ದಿವ್ಯಾ ಶೆಟ್ಟಿ ತನ್ನ ಪತಿ ಅಮರನಾಥ್ ಶೆಟ್ಟಿ ಜೊತೆ ಊಟ ಮಾಡಲು ಹೊಟೇಲ್ ಹೊರಗಡೆ ಕಾರು ಪಾರ್ಕ್ ಮಾಡಿ ಹೋಗಿದ್ದರು. ಈ ವೇಳೆ ಕಳ್ಳರು ಕಾರಿನ ಗಾಜು ಒಡೆದು ಜಖಂಗೊಳಿಸಿ, ಒಳಗಿದ್ದ ಡೆಲ್ ಕಂಪೆನಿಯ ಲ್ಯಾಪ್ಟಾಪ್ ಬ್ಯಾಗ್ ಸಮೇತ ಹಾಗೂ ಬಟ್ಟೆಗಳಿರುವ ಸೂಟ್ಕೇಸ್ ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 1,00,000 ರೂ. ಅಂದಾಜಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story