ಅ.28ರಿಂದ 3 ದಿನ ಮಂಗಳೂರಿಗೆ ನೀರು ಸರಬರಾಜು ವ್ಯತ್ಯಯ
ಮಂಗಳೂರು : ತುಂಬೆ ಸ್ಥಾವರದ ಜಾಕ್ವೆಲ್ನಲ್ಲಿ ತುರ್ತು ಕಾಮಗಾರಿ ನಡೆಯಲಿರುವುದರಿಂದ ಅ.28ರಿಂದ 30ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಅ.28ರ ಬೆಳಗ್ಗೆ 6ರಿಂದ ಅ.30ರ ಬೆಳಗ್ಗೆ 6ರವರೆಗೆ ನೀರು ಸರಬರಾಜು ಸ್ಥಗಿತಗೊಳ್ಳಲಿದ್ದು, ನಾಗರಿಕರು ಸಹಕರಿಸುವಂತೆ ಮಂಗಳೂರು ಮನಪಾ ಕಾರ್ಯಪಾಲಕ ಅಭಿಯಂತರರ ಪ್ರಕಟನೆ ತಿಳಿಸಿದೆ.
Next Story