ಥ್ರೋಬಾಲ್: ವಿವಿ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ
ಮಂಗಳೂರು : ನಗರದ ವಿಶ್ವವಿ ದ್ಯಾನಿಲಯ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಮಹಮ್ಮದ್ ಇತಿಶಾಮ್ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 29 ರಿಂದ 31 ರವರೆಗೆ ಹರ್ಯಾಣದ ಎಂ. ಡಿ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ 29 ನೇ ಸಬ್ ಜೂನಿಯರ್ ಹುಡುಗರ ಮತ್ತು ಹುಡುಗಿಯರ, 44 ನೇ ಸೀನಿಯರ್ ಪುರುಷರ ಮತ್ತು ಮಹಿಳೆಯರ ಥ್ರೋಬಾಲ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡದಲ್ಲಿ ಭಾಗವಾಗಿರಲಿದ್ದಾರೆ. ಗದಗದಲ್ಲಿ ಅಕ್ಟೋಬರ್ 16 ರಿಂದ 25 ರವರೆಗೆ ನಡೆದ ರಾಜ್ಯಮಟ್ಟದ ಥ್ರೋಬಾಲ್ ಕ್ಯಾಂಪ್ನಲ್ಲಿ ಈ ಆಯ್ಕೆ ನಡೆದಿದೆ.
Next Story