ಫಾ.ರೋಶನ್ ಕ್ಯಾಸ್ಟಲಿನೋರಿಗೆ ಡಾಕ್ಟರೇಟ್
ಕಾರ್ಕಳ, ಅ.27: ಬೆಂಗಳೂರಿನ ಸೈಂಟ್ ಜೋಸೆಫ್ (ಸ್ವಾಯತ್ತ) ಕಾಲೇಜಿನ ಭೌತಶಾಸ್ತ್ರ ಸಂಶೋಧನಾ ವಿಭಾಗದ ನಿರ್ದೇಶಕ, ಕಾರ್ಕಳ ಕುಕ್ಕುಂದೂರು ಗ್ರಾಮದ ನಕ್ರೆಯ ಫಾ.ರೋಶನ್ ಕ್ಯಾಸ್ಟಲಿನೋ ಎಸ್. ಜೆ. ಅವರಿಗೆ ಬೆಲ್ಜಿಯಂನ ನಮೂರ್ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ. ಭೌತಶಾಸ್ತ್ರದ ಸೆಮಿ ಕಂಡಕ್ಟರ್ ವಿಷಯದಲ್ಲಿ ಪ್ರೊಫೆಸರ್ ರಾಬರ್ಟ್ ಸ್ಪೋರ್ಕನ್ ಮಾರ್ಗದರ್ಶನದಲ್ಲಿ 4 ವರ್ಷಗಳ ಕಾಲ ನಡೆಸಿದ ಸಂಶೋಧನೆಗೆ ಡಾಕ್ಟರೇಟ್ ಪದವಿ ದೊರೆತಿದೆ.
ನಕ್ರೆ ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕ ಪಡೆದಿರುವ ರೋಶನ್ ನಕ್ರೆ ಸರಕಾರಿ ಪ್ರೌಢಶಾಲೆ, ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಸಿ, ಬೆಂಗಳೂರಿನ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಎಂಎಸ್ಸಿ ಪದವಿ ಗಳಿಸಿದ್ದಾರೆ.
ರೋಶನ್ ಅವರು ಕಾರ್ಕಳ ನಕ್ರೆಯ ನಿವೃತ್ತ ಶಿಕ್ಷಕ ದಂಪತಿ ಜಾರ್ಜ್ ಕ್ಯಾಸ್ಟೋಲಿನೋ ಹಾಗೂ ರಿನಾ ಕ್ಯಾಸ್ಟೋಲಿನೋ ಅವರ ಪುತ್ರ.
Next Story