ದ.ಕ.ಜಿಲ್ಲೆ : ಕೋವಿಡ್ಗೆ ಮೂವರು ಬಲಿ
ಮಂಗಳೂರು, ಅ.26: ದ.ಕ.ಜಿಲ್ಲೆಯಲ್ಲಿ ಬುಧವಾರ ಕೋವಿಡ್ಗೆ ಮೂವರು ಬಲಿಯಾಗಿದ್ದು, 28 ಪಾಸಿಟಿವ್ ಪ್ರಕರಣದೊಂದಿಗೆ ಶೇ.0.34 ಪಾಸಿಟಿವ್ ದಾಖಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 20,73,658 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 19,58,291 ನೆಗೆಟವ್ ಮತ್ತು 1,15,367 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಬುಧವಾರ 34 ಮಂದಿ ಬಿಡುಗಡೆಗೊಂಡಿದ್ದು, ಈವರೆಗೆ 1,13,415 ಮಂದಿ ಬಿಡುಗಡೆಗೊಂಡಂತಾಗಿದೆ. ಬುಧವಾರ ಮೂವರು ಬಲಿಯಾಗುವುದರೊಂದಿಗೆ 1681 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ಸದ್ಯ 271 ಸಕ್ರಿಯ ಪ್ರಕರಣವಿದೆ.
ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 88,423 ಪ್ರಕರಣ ದಾಖಲಿಸಿ, 1,07,35,270 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story