ನರ್ಸ್ ನಾಪತ್ತೆ
ಮಂಗಳೂರು, ಅ. 28: ನಗರದ ಖಾಸಗಿ ಆಸ್ಪತ್ರೆಯ ನರ್ಸ್ವೊಬ್ಬರು ನಾಪತ್ತೆಯಾಗಿರುವ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಲ್ಮಠ ನಿವಾಸಿ ಜಸ್ಮಿತಾ (25) ನಾಪತ್ತೆಯಾದ ಯುವತಿ. ಬುಧವಾರ ಮಧ್ಯಾಹ್ನದಿಂದ ಯುವತಿ ನಾಪತ್ತೆಯಾಗಿದ್ದು, ಮನೆಗೂ ಹೋಗದೆ, ಆಸ್ಪತ್ರೆಗೂ ತೆರಳದೆ ಕಾಣೆಯಾಗಿದ್ದಾರೆ. ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಬಂದರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ.
Next Story