ಕೆರೆಗೆ ಬಿದ್ದು ಮಹಿಳೆ ಮೃತ್ಯು
ಕಾರ್ಕಳ, ನ. 24: ಮಹಿಳೆಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಕೆರೆ ಬಿದ್ದು ಮೃತಪಟ್ಟ ಘಟನೆ ನ.24ರಂದು ಬೆಳಗ್ಗೆ ಕಾರ್ಕಳ ಹನುಮಾನ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಮೃತರನ್ನು ಕಾರ್ಕಳ ದಾನಶಾಲೆ ನಿವಾಸಿ ಕೆ.ಬಿ.ಪರಸಪ್ಪಎಂಬವರ ಪತ್ನಿ ಗೌರಮ್ಮ ಟಿ.(65) ಎಂದು ಗುರುತಿಸಲಾಗಿದೆ. ನಾಗರ ಬಾವಿ ಕಡೆ ವಾಕಿಂಗ್ ಹೋದ ಇವರು, ಆಕಸ್ಮಿಕವಾಗಿ ಕಾಲು ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story