ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಅಲ್ಫೋನ್ಸ್ ಫ್ರಾಂಕೋ ಮರು ಆಯ್ಕೆ
ಆಲ್ಫೋನ್ಸ್ ಫ್ರಾಂಕೋ
ಬೆಳ್ತಂಗಡಿ : ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಇದರ ರಾಷ್ಟ್ರೀಯ ಪ್ರತಿನಿಧಿ ಸಮ್ಮೇಳನದಲ್ಲಿ ಆಲ್ಫೋನ್ಸ್ ಫ್ರಾಂಕೋ ಅವರು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಮರು ಆಯ್ಕೆಯಾಗಿದ್ದಾರೆ.
ಕರ್ನಾಟಕದಿಂದ ಮೂರು ಮಂದಿ ಮಾತ್ರ ಕಾರ್ಯಕಾರಿ ಮಂಡಳಿಯಲ್ಲಿ ಅವಕಾಶ ಪಡೆದಿದ್ದು, ಆ ಪೈಕಿ ಅಲ್ಫೋನ್ಸ್ ಫ್ರಾಂಕೋ ಒಬ್ಬರಾಗಿದ್ದಾರೆ.
ಈ ಹಿಂದಿನ ಮೂರು ವರ್ಷದ ಕಾರ್ಯದರ್ಶಿಯಾಗಿ ಸೇವೆ ಸಲಿಸಿದ್ದ ಇವರು ಇದೀಗ ಎರಡನೇ ಬಾರಿಗೆ ಕಾರ್ಯದರ್ಶಿ ಯಾಗಿ ಆಯ್ಕೆಯಾಗಿದ್ದಾರೆ. ಅವರು ಬೆಳ್ತಂಗಡಿ ಸೋಜಾ ಎಲೆಕ್ಟ್ರಾನಿಕ್ಸ್ ಇದರ ಆಡಳಿತ ಪಾಲುದಾರರಾಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.
Next Story