ದಮಾಮ್ : ಖಿದ್ಮತುಲ್ ಇಸ್ಲಾಮ್ ಅಸೋಸಿಯೇಷನ್ ಕೋಡಿಜಾಲ್ ವಾರ್ಷಿಕ ಸಭೆ, ಪದಾಧಿಕಾರಿಗಳ ಆಯ್ಕೆ
ಅನ್ಸಾರ್ ಕೋಡಿಜಾಲ್
ದಮಾಮ್ : ಖಿದ್ಮತುಲ್ ಇಸ್ಲಾಮ್ ಅಸೋಸಿಯೇಷನ್ ಕೋಡಿಜಾಲ್ ಸಮಿತಿಯ 14ನೇ ವಾರ್ಷಿಕ ಮಹಾಸಭೆಯು ದಮಾಮ್ ನಲ್ಲಿ ಹಾಜಿ ಇಬ್ರಾಹಿಂ ಕೆಎಂಕೆ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಸಭೆಯಲ್ಲಿ ಮರ್ಕಝುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ನೌಶಾದ್ ಪೊಲ್ಯ ಮತ್ತು ಮರ್ಕಝುಲ್ ಹುದಾ ಕುಂಬ್ರ ಇದರ ಜುಬೈಲ್ ಘಟಕದ ಅಧ್ಯಕ್ಷ ಶಂಸುದ್ದೀನ್ ಬೈರಿಕಟ್ಟೆ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ನವಾಝ್ ಎಬಿಎಚ್ ಅವರು ವರದಿ ವಾಚಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
2022ನೇ ಸಾಲಿನ ನೂತನ ಅಧ್ಯಕ್ಷರಾಗಿ ಅನ್ಸಾರ್ ಎಜಿಟಿ, ಪ್ರಧಾನ ಕಾರ್ಯದರ್ಶಿಯಾಗಿ ತನ್ವೀರ್ ಜುಬೈಲ್, ಕೋಶಾಧಿಕಾರಿಯಾಗಿ ಸಾದಿಕ್ ಕೋಡಿಜಾಲ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಫಾರೂಕ್ ಕೋಡಿಜಾಲ್, ಅನ್ವರ್ ಪಾವೂರು ಅವರನ್ನು ಆರಿಸಲಾಯಿತು. ಜೊತೆಕಾರ್ಯದರ್ಶಿಯಾಗಿ ಶಕೂರ್ ಕೋಡಿಜಾಲ್ ಮತ್ತು ನೌಫಾಲ್ ಜುಬೈಲ್ ಅವರನ್ನು ಆಯ್ಕೆ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿಗಳಾಗಿ ರಿಯಾದ್ ವಲಯ ಇಮ್ತಿಯಾಝ್ ರಿಯಾದ್, ಜುಬೈಲ್ ವಲಯ ಅಝೀಝ್ ಜುಬೈಲ್, ದಮಾಮ್ ಮತ್ತು ಅಲ್ ಹಸ್ಸ ವಲಯ ಆಸೀಫ್ ಮತ್ತು ನವಾಝ್ ಎಬಿಎಚ್ ಅವರನ್ನು ಆರಿಸಲಾಯಿತು.
ಸಲಹೆಗಾರರಾಗಿ ಅಶ್ರಫ್ ನೌಶಾದ್ ಪೊಲ್ಯ ಮತ್ತು ಶಂಸುದ್ದೀನ್ ಬೈರಿಕಟ್ಟೆ, ಅನ್ವರ್ ಕೆಎಂಕೆ, ರಹೀಮ್ ಕೆಎಂ, ನಾಸಿರ್ ಜುಬೈಲ್, ಶಮೀಮ್ ಕೋಡಿಜಾಲ್ ಅವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಹಾಜಿ ಇಬ್ರಾಹಿಂ ಕೆಎಂಕೆ ಅವರನ್ನು ಆರಿಸಲಾಯಿತು.
ಸಭೆಯ ನಂತರ ಎಲ್ಲಾ ಸದಸ್ಯರುಗಳಿಗೆ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಎಂಬ 4 ತಂಡಗಳ ನಡುವೆ ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್, ಮತ್ತು ಈಜು ಸ್ಪರ್ಧೆ ಏರ್ಪಡಿಸಲಾಯಿತು. ಇದರಲ್ಲಿ ಕೋಶಾಧಿಕಾರಿ ತಂಡ ಪ್ರಥಮ ಮತ್ತು ಮಾಜಿ ಅಧ್ಯಕ್ಷರ ತಂಡ ಎರಡನೇ ಸ್ಥಾನ ಪಡೆಯಿತು. ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಕೋಶಾಧಿಕಾರಿ ಸಾದಿಕ್ ಕೋಡಿಜಾಲ್ ವಂದಿಸಿದರು.