ಅಕ್ರಮ ಗಾಂಜಾ ಮಾರಾಟ: ಓರ್ವನ ಬಂಧನ
ಉಡುಪಿ, ನ.28: ಅಕ್ರಮ ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಓರ್ವನನ್ನು ಉಡುಪಿ ಸೆನ್ ಪೊಲೀಸರು ರವಿವಾರ ಬೆಳಗ್ಗೆ ಮೂಡುಬೆಟ್ಟು ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಗೌತಮ ಬುದ್ದ ಬಂಧಿತ ಆರೋಪಿ. ಈತನಿಂದ 35,000 ರೂ. ಮೌಲ್ಯದ 1 ಕಿಲೋ, 204 ಗ್ರಾಂ ತೂಕದ ಗಾಂಜಾವನ್ನು ಮತ್ತು ಮೊಬೈಲ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈತ ಪ್ರಣಮ್ ಎಂಬಾತನಿಂದ ಗಾಂಜಾವನ್ನು ಪಡೆದುಕೊಂಡು ಅದನ್ನು ಆತನ ಸೂಚನೆಯ ಮೇರೆಗೆ ಮಾರಾಟ ಮಾಡಲು ಗಿರಾಕಿ ಕಾಯುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story