ಬೆಂಕಿ ಅಕಸ್ಮಿಕ: ಮಹಿಳೆ ಮೃತ್ಯು
ಬೈಂದೂರು, ಡಿ.1: ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕಾಪ್ಸಿ ರಾಬಿಯಾ (57) ಎಂದು ಗುರುತಿಸಲಾಗಿದೆ. ಇವರು ನ.12 ರಂದು ಬಚ್ಚಲು ಮನೆಯ ಸ್ನಾನಕ್ಕೆ ಹೋಗಿದ್ದು, ಅಲ್ಲಿ ಒಲೆಯ ಬೆಂಕಿಯು ಇವರು ಧರಿಸಿದ ಬಟ್ಟೆಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು, ನ.30ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story