ಮಹಿಳೆ ನಾಪತ್ತೆ
ಮಂಗಳೂರು, ಡಿ.1: ನೀರುಮಾರ್ಗ ಸಮೀಪದ ಬೊಂಡಂತಿಲ ಪಡು ಎಂಬಲ್ಲಿ ವಾಸವಿದ್ದ ರಾಜೇಶ್ ಎಂಬವರ ಪತ್ನಿ ಕಾವ್ಯ (26) ಎಂಬವರು ನ.27ರಂದು ನಾಪತ್ತೆಯಾದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತಿ ರಾಜೇಶ್ ಮಗುವನ್ನು ಶಾಲೆಗೆ ಬಿಟ್ಟು ಪುತ್ತೂರಿಗೆ ಕೆಲಸಕ್ಕೆ ಹೋಗಿದ್ದರು. ಮರಳಿ ರಾತ್ರಿ ಮನೆಗೆ ಬಂದಾಗ ಮಗು ಪಕ್ಕದ ಮನೆಯಲ್ಲಿದ್ದು, ಅವರಲ್ಲಿ ವಿಚಾರಿಸಿದಾಗ ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಬಳಿಕ ಸಹಾಯವಾಣಿಯವರು ಎಂದು ಹೇಳಿದ ವ್ಯಕ್ತಿಯೊಬ್ಬರು ಕರೆ ಮಾಡಿ ನಿಮ್ಮ ಪತ್ನಿ ನಮ್ಮಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಮರುದಿನ ರಾತ್ರಿ 8 ಗಂಟೆಗೆ ಸಹಾಯವಾಣಿ ಯವರಲ್ಲಿ ತಾನು ಸುಳ್ಯದಲ್ಲಿರುವ ತಾಯಿ ಮನೆಗೆ ಹೋಗುವುದಾಗಿ ತಿಳಿಸಿ ಹೋಗಿದ್ದು, ತಾಯಿ ಮನೆಗೂ ಹೋಗದೆ ಮನೆಗೂ ಹಿಂತಿರುಗದೆ ನಾಪತ್ತೆಯಾಗಿದ್ದಾರೆ.
ಸುಮಾರು 4.9 ಅಡಿ ಎತ್ತರ, ಗೋದಿ ಮೈ ಬಣ್ಣ, ತುಳು, ಕನ್ನಡ ಭಾಷೆ ಮಾತನಾಡುತ್ತಾರೆ. ಕೆಂಪು ಬಣ್ಣದ ಚೂಡಿದಾರ ಧರಿಸಿದ್ದಾರೆ.
Next Story