ಕೋಟ : ಬಾಲಕ ನಾಪತ್ತೆ
ಕೋಟ : ಕೋಡಿ ಕನ್ಯಾನದ ನಾಸಿರ್ ಎಂಬವರ ಪುತ್ರ ಮುಹಮ್ಮದ್ ನಿಶಾನ್ (14) ರವಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯಿಂದ ಸ್ನೇಹಿತನ ಮನೆಗೆ ಹೋಗಿ ಅಲ್ಲಿಂದ ಕೋಟ ಪಡುಕರೆ ಎಂಬಲ್ಲಿಗೆ ಆಟ ಆಡಲು ಹೋಗುತ್ತೇನೆ ಎಂದು ಹೋದವನು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಈತ ಸುಮಾರು 4.5 ಅಡಿ ಎತ್ತರ, ಗೋದಿ ಬಣ್ಣ ಮೈಕಟ್ಟು ಹೊಂದಿದ್ದು, ಕನ್ನಡ ಹಾಗೂ ಬ್ಯಾರಿ ಭಾಷೆ ಮಾತನಾಡುತ್ತಿದ್ದು. ಈತನ ಬಗ್ಗೆ ಸುಳಿವು ಸಿಕ್ಕಿದಲ್ಲಿ 9880897535 ಈ ನಂಬರಿಗೆ ಸಂಪರ್ಕಿಸಲು ತಿಳಿಸಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story