ಡಿ.3: ನಂದಾವರದಲ್ಲಿ ಜಿಲ್ಲಾ ದಾರಿಮೀಸ್ 19ನೇ ವಾರ್ಷಿಕ ಕಾರ್ಯಕ್ರಮ
ಬಿ.ಸಿ.ರೋಡ್, ಡಿ.2: ದ.ಕ. ಜಿಲ್ಲಾ ದಾರಿಮೀಸ್ ಇದರ 19ನೇ ವಾರ್ಷಿಕ, ಶೈಖುನಾ ಶಂಸುಲ್ ಉಲಮಾ ಆಂಡ್ ನೇರ್ಚೆ ಹಾಗೂ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮವು ಡಿ.3ರಂದು ಜರುಗಲಿದೆ.
ಅಂದು ಬೆಳಗ್ಗೆ 8ರಿಂದ ರಾತ್ರಿ 10ರ ತನಕ ನಂದಾವರ ಕೇಂದ್ರ ಜುಮಾ ಮಸೀದಿಯ ವಠಾರದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಹಲವು ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ದಾರಿಮೀಸ್ ಅಧ್ಯಕ್ಷ ಕೆ.ಬಿ.ಅಬ್ದುಲ್ ಖಾದರ್ ದಾರಿಮಿ ಕೊಡುಂಗಾಯಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story