ನರಿಕೊಂಬು: ಮನೆಯಂಗಳಕ್ಕೆ ಬಂದ ಚಿರತೆ !
ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಬಂಟ್ವಾಳ, ಡಿ.3: ನರಿಕೊಂಬು ಗ್ರಾಮದ ನಿರ್ಮಲ್ ಎಂಬಲ್ಲಿ ರಾತ್ರಿ ವೇಳೆ ಚಿರತೆಯೊಂದು ಮನೆಯ ಆವರಣಕ್ಕೆ ಬಂದು ಹೋಗುವ ದೃಶ್ಯವೊಂದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಡಿ.2ರಂದು ಮುಂಜಾವ 2 ಗಂಟೆ ಸುಮಾರಿಗೆ ನಿರ್ಮಲ್ ನಿವಾಸಿ ಜಯಂತ್ ನಿರ್ಮಲ್ ಮನೆಯ ಅಂಗಳಕ್ಕೆ ಚಿರತೆಯೊಂದು ನುಗ್ಗಿದೆ. ಬಳಿಕ ಯಾವುದೋ ಶಬ್ದ ಕೇಳಿಸಿದ್ದರಿಂದ ಚಿರತೆ ಅಲ್ಲಿಂದ ಓಡಿ ಹೋಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಕುರಿತು ನರಿಕೊಂಬು ಗ್ರಾಪಂಗೆ ಮಾಹಿತಿ ನೀಡಿರುವುದಾಗಿ ಮನೆಯವರು ತಿಳಿಸಿದ್ದಾರೆ.
Next Story