ಬಿ.ಸಿ.ರೋಡ್ : ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಕೀಲರ ದಿನಾಚರಣೆ
ಬಿ.ಸಿ.ರೋಡ್ : ವಕೀಲರ ದಿನಾಚರಣೆಯ ಅಂಗವಾಗಿ ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು ನ್ಯಾಯವಾದಿಗಳಾದ ಅಶ್ರಫ್ ಅಗ್ನಾಡಿ ಹಾಗೂ ನವೀನ್ ಬನ್ನಂತಾಯರೊಂದಿಗೆ ಕೇಕ್ ಕತ್ತರಿಸಿ, ವಿಚಾರ ವಿನಿಮಯ ಮಾಡುವ ಮೂಲಕ ಆಚರಿಸಿದರು.
ಅತಿಥಿಗಳಾಗಿ ಆಗಮಿಸಿದ ವಕೀಲರು ಮಕ್ಕಳೊಂದಿಗೆ ತಮ್ಮ ವಕೀಲ ವೃತ್ತಿಯ ಬಗ್ಗೆ ಮಾರ್ಗದರ್ಶನ ನೀಡಿದರು. ಶಾಲಾ ಟ್ರಸ್ಟಿಗಳಾದ ಸಲೀಂ ಅಲ್ತಾಫ್ ಮತ್ತು ಸನಾ ಅಲ್ತಾಫ್ ಹಾಗೂ ಮುಖ್ಯೋಪಾಧ್ಯಾಯರಾದ ಗಿರೀಶ್ ಕಾಮತ್ ಅವರು ಹೂಗುಚ್ಛ ಮತ್ತು ನೆನಪಿನ ಕಾಣಿಕೆಯನ್ನು ನೀಡುದರೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.
ವಿದ್ಯಾರ್ಥಿನಿಯರಾದ ಆಯಿಷಾ ಸಜ್ನಾ ಮತ್ತು ಆಯಿಷಾ ಅಸ್ನಾ ವಕೀಲರ ದಿನಾಚರಣೆ ಮತ್ತು ವಕೀಲರ ಮಹತ್ವದ ಬಗ್ಗೆ ಮಾತನಾಡಿದರು.
ಶಾಲಾ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನಹೀಮ್, ಇಂಸಿಯ, ಫಿಝನ್, ಝುಹಾ ಅವರು ಅತಿಥಿಗಳಿಗೆ ತಮ್ಮ ಶಾಲಾ ಚಟುವಟಿಕೆಗಳನ್ನು ವಿವರಿಸಿದರು.
ಶಿಕ್ಷಕಿಯರಾದ ರಂಝಿಯಾ ಕಾರ್ಯಕ್ರಮ ನಿರೂಪಿಸಿ, ಸಂಧ್ಯಾ ವಂದಿಸಿದರು.