ಮಂಗಳೂರು: 'ಪೋಲಾರ್ ಬೇರ್ ಐಸ್ ಕ್ರೀಮ್ ಸಂಡೇ ಝೋನ್' ಶುಭಾರಂಭ
ಮಂಗಳೂರು: ಬೆಂಗಳೂರಿನ ನಂ.1 ಐಸ್ ಕ್ರೀಂ ಸಂಡೇ ಪಾರ್ಲರ್ ಸರಣಿಯಾದ ಪೋಲಾರ್ ಬೇರ್ ಇದೀಗ 98ನೆ ಫ್ರಾಂಚೈಸಿ ಘಟಕವನ್ನು ಮಂಗಳೂರಿನ ಮಣ್ಣಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ಶ್ರೀ ರಾಧ ಕಟ್ಟಡದಲ್ಲಿ ರವಿವಾರ ಖ್ಯಾತ ಚಲನಚಿತ್ರ ನಿರ್ದೇಶಕ ಗುರುಕಿರಣ್ ಚಾಲನೆ ನೀಡಿ, ಪೋಲಾರ್ ಬೇರ್ ತಂಡ ತಮ್ಮ ಉದ್ಯಮ ವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ, ಮಂಗಳೂರಿನಲ್ಲೂ ಯಶಸ್ಸು ಪಡೆಯಲಿ ಎಂದು ಶುಭ ಹಾರೈಸಿದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಶುಭ ಹಾರೈಸಿದರು. ಮಂಗಳೂರು ಫ್ರಾಂಚೈಸಿ ಮುಖ್ಯಸ್ಥ ಜಯೇಶ್, ಹನಿಕೋಂಬ್ ರಿಟೇಲ್ ಇಂಡಿಯಾ ಪ್ರೈವೇಟ್ ಲಿ. ಮತ್ತು ಪೋಲಾರ್ ಬೇರ್ ನ ನಿರ್ದೇಶಕ ಕಿಶೋರ್ ರೈ, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.
ಪೋಲಾರ್ ಬೇರ್ ವಿಶೇಷ : ಪೋಲಾರ್ ಬೇರ್ ಸರಣಿಯ 98ನೆ ಪ್ರತಿನಿಧಿ ಘಟಕ ಮಂಗಳೂರಿನಲ್ಲಿ ಆರಂಭಿಸಲು ಈಗಾಗಲೇ ಬೆಂಗಳೂರಿನಲ್ಲಿ 58 ಘಟಕಗಳನ್ನು ಹೊಂದಿದೆ. 2008ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಪೋಲಾರ್ ಬೇರ್ ಐಸ್ಕ್ರೀಂ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಫ್ರಾಂಚೈಸಿಯನ್ನು ಹೊಂದಿದೆ. ಅತ್ಯುತ್ಕೃಷ್ಟ ಐಸ್ಕ್ರೀಂ, ವಿಶ್ವದರ್ಜೆಯ ತಯಾರಿಕಾ ವಿಧಾನ, ಹೊಸತನದ ಹುಡುಕಾಟ ಮತ್ತು ವೇಗತ್ವರಿತ ಸೇವೆಯ ಮೂಲಕ ಮಾರುಕಟ್ಟೆಯಲ್ಲಿ ಪೋಲಾರ್ ಬೇರ್ ತನ್ನದೇ ಆದ ಛಾಪು ಮೂಡಿಸಿದೆ. ಹೀಗಾಗಿ ಇದು ಭಾರತದಲ್ಲೇ ಅತಿ ವೇಗದಿಂದ ಬೆಳೆಯುತ್ತಿರುವ ಐಸ್ಕ್ರೀಂ ಸರಣಿಯಾಗಿ ಹೆಸರು ಪಡೆದಿದೆ.
ನೂರಕ್ಕೂ ಹೆಚ್ಚು ಬಗೆಯ ಐಸ್ಕ್ರೀಂಗಳು, ಐಸ್ಕ್ರೀಂ ರೆಡ್ ವೆಲ್ ವೆಟ್ ಚಾಕೋಸ್, ಮಿಲ್ಕ್ ಶೇಕ್ಗಳು, ಸ್ಯಾಂಡ್ ವಿಚ್ಗಳು, ಐಸ್ಕ್ರೀಂ ಕೇಕ್ಗಳು ಮತ್ತಿತರ - ಐಟಂಗಳು ಮೆನುವಿನಲ್ಲಿವೆ. ಪೋಲಾರ್ - ಬೇರ್ ಗ್ರಾಹಕರಲ್ಲಿ ಬಹುತೇಕರು ತುಂಬಾ ಇಷ್ಟಪಡುವ ಸಂಡೇ ಎಂದರೆ ಡೆತ್ ಬೈ ಚಾಕೊಲೇಟ್ ಅಥವಾ ಜನಪ್ರಿಯವಾಗಿರುವ ಚಾಕೋಲೇಟ್ ಕೇಕ್, ವೆನಿಲ್ಲಾ ಐಸ್ಕ್ರೀಂ, ಹಾಟ್ ಚಾಕೊಲೇಟ್ ಸಾಸ್ ಮತ್ತು ಗೋಡಂಬಿ ಬಳಸಿ ತಯಾರಿಸುವ ಡಿಬಿಸಿ ಗ್ರಾಹಕರ ಅಚ್ಚುಮೆಚ್ಚಿನ ಐಸ್ ಕ್ರೀಂ ಸಂಡೇ.
ಪೋಲಾರ್ ಬೇರ್ ತನ್ನ ಮೆನುವನ್ನು ನಿರಂತರ ಅಪ್ ಡೇಟ್ ಮಾಡುತ್ತಾ ಇರುತ್ತದೆ. ಕೊರೋನ ಕಾಲದಲ್ಲಿ ಜನರಿಗೆ ಐಸ್ಕ್ರೀಂ ಸೇವಿಸುವ ಅನುಭವ ತಪ್ಪದಂತೆ ಪೋಲಾರ್ ಬೇರ್ ತನ್ನ ಜನಪ್ರಿಯ ವಾಹಿನಿ ಸಂಡೇಗಳನ್ನು ಮನೆಗೆ ಒಯ್ಯಬಹುದಾದ ಹೊಸ ಟಬ್ಗಳ ರೂಪದಲ್ಲಿಯೂ ಬಿಡುಗಡೆ ಮಾಡಿದೆ. ಮನೆಯ ಸಮಾರಂಭಗಳಲ್ಲಿ ಸೇವಿಸಲು ಅನುಕೂಲವಾಗುವಂತೆ ವಿಭಿನ್ನ ಐಸ್ ಕ್ರೀಂ ಕೇಕ್ಗಳನ್ನೂ ತರಲಾಗಿದೆ. ರೆಡ್ ಡ್ಯಾನ್ಸ್ ವೆಲ್ವೆಟ್ ಚಾಕೊ ಸಿನ್, ಫೂಟ್ ಜೆಸ್ಟ್ ತಿಂಗಳಿ ಚೋಕೋಝಿಲ್ಲಾ, ಗಡ್ಬಡ್ , ಡ್ರೈ ಫೂಟ್ ರ್ಯಕ ಸ್ಪೆಷಲ್, ಮ್ಯಾಂಗೋ ಬೆರಿ, ಲೀಚಿ ಸಂಡೇ, ತಲುಪಿ ಐಸ್ಕ್ರೀಂ, ಪಿಜ್ಜಾ ಬನೋಫಿ ಸಂಡೇ ಮುಂತಾದವು ಇಲ್ಲಿನ ಜನಪ್ರಿಯ ಪರಿಚ ಸಂಡೇಗಳಲ್ಲಿ ಕೆಲವು. ಇಲ್ಲಿನ ಐಸ್ಕ್ರೀಂ ಸ್ವಾದಿಷ್ಟ ಅನುಭವಿಸಲು ಮಂಗಳೂರಿನ ಮನೆ ಮಣ್ಣಗುಡ್ಡೆ ಶಾಲೆ ಎದುರಿನ ವಿಶಾಲವಾದ ಐಸ್ ಕ್ರೀಂ ಪಾರ್ಲರ್ ಗೆ ಭೇಟಿ ನೀಡಲೇಬೇಕು.
ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳದಿರುವುದು ಪೋಲಾರ್ ಬೇರ್ ನ ಯಶಸ್ಸಿನ ಗುಟ್ಟು, ಮಂಗಳೂರಿನ ಐಸ್ ಕ್ರೀಂ ಪ್ರಿಯರಿಗೆ ವಿಶಿಷ್ಟವಾದ ಐಸ್ಕ್ರೀಂ ಅನುಭವ ನೀಡಲು ನಾವು ಸಿದ್ಧರಾಗಿದ್ದೇವೆ ಎಂದು ಪೋಲಾರ್ ಬೇರ್ನ ನಿರ್ದೇಶಕ ಕಿಶೋರ್ ರೈ ತಿಳಿಸಿದ್ದಾರೆ.