ಉಡುಪಿ: ಡಿ.7ಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ
ಉಡುಪಿ, ಡಿ. 6: ಉಡುಪಿ ನಗರಸಭಾ ವ್ಯಾಪ್ತಿಯ ಬಜೆ ನೀರು ಸರಬರಾಜು ಕೇಂದ್ರದ ವಿದ್ಯುತ್ ಸರಬರಾಜು ಮಾರ್ಗದಲ್ಲಿ ಮೆಸ್ಕಾಂ ಇಲಾಖಾ ವತಿಯಿಂದ ದುರಸ್ಥಿ ಕಾರ್ಯ ಇರುವುದರಿಂದ ಡಿ. 7ರಂದು ನಗರಸಭಾ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ನಗರಸಭೆ ಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
Next Story