ಬೆಳ್ತಂಗಡಿ: ಅಕ್ರಮ ಗೋಸಾಗಾಟ; ಇಬ್ಬರು ಆರೋಪಿಗಳ ಬಂಧನ
ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಬೊಳ್ಳಾಜೆ ಸಮೀಪ ಅಕ್ರಮವಾಗಿ ಗೋಸಾಗಾಟ ನಡೆಸಲು ಮುಂದಾದ ಆರೋಪಿಗಳನ್ನು ಹಾಗೂ ಸ್ವತ್ತುಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಮಂಗಳವಾರ ನಡೆದಿದೆ.
ಗರ್ಡಾಡಿ ಗ್ರಾಮದ ಗರ್ಡಾಡಿ ಪೇಟೆಯಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಪಿಕಪ್ ವಾಹನದಲ್ಲಿ ವಶಕ್ಕೆ ಪಡೆದಾಗ ಅಕ್ರಮ ಗೋಸಾಗಾಟ ಕೃತ್ಯ ಬೆಳಕಿಗೆ ಬಂದಿದ್ದು, ಆರೋಪಿಗಳಾದ ಕೊಡೆಂಚಡ್ಕ ನಿವಾಸಿ ನೆವಿಲ್ ಲ್ಯಾನ್ಸಿ ಪಿಂಟೊ(30) ಮತ್ತು ಗರ್ಡಾಡಿ ಗ್ರಾಮದ ಶೇಖರ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ಹಸು ಅಂದಾಜು ಮೌಲ್ಯ 10000 ರೂ. ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ವಾಹನದ ಅಂದಾಜು ಮೌಲ್ಯ 1.5 ಲಕ್ಷ ರೂ. ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
Next Story