ಹೋಮ್ ಸ್ಟೇನಲ್ಲಿನ ಪ್ರವಾಸಿಗರ ಸೊತ್ತು ಕಳವು
ಮಲ್ಪೆ, ಜ.3: ಮಲ್ಪೆಯ ಹೋಮ್ ಸ್ಟೇನಲ್ಲಿ ಉಳಿದುಕೊಂಡಿದ್ದ ಬೆಂಗಳೂರು ಮೂಲದ ಪ್ರವಾಸಿಗರ ನಗದು ಹಾಗೂ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಜ.1ರಂದು ರಾತ್ರಿ ವೇಳೆ ನಡೆದಿದೆ.
ಬೆಂಗಳೂರಿನ ಧೀರಜ್ ಮತ್ತು ಅವರ ಸ್ನೇಹಿತರು ಪ್ರವಾಸದ ಬಗ್ಗೆ ಮಲ್ಪೆಯ ಹೋಮ್ ಸ್ಟೇನಲ್ಲಿ ಉಳಿದು ಕೊಂಡಿದ್ದು, ರಾತ್ರಿ ವೇಳೆ ಇವರ ರೂಮಿಗೆ ಅಕ್ರಮ ಪ್ರವೇಶ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ಬ್ಯಾಗ್ನಲ್ಲಿದ್ದ ಒಟ್ಟು 30,500ರೂ. ನಗದು ಮತ್ತು 3 ಎಟಿಎಂ ಕಾರ್ಡ್, ಆಧಾರ ಕಾರ್ಡ್, ಪಾನ್ ಕಾರ್ಡ್ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story