ಪಾಟ್ರಕೋಡಿ ಮಸೀದಿ ಅಧ್ಯಕ್ಷರಾಗಿ ಹಮೀದ್ ಹಾಜಿ ಕೋಡಿ ಆಯ್ಕೆ
ಹಮೀದ್ ಹಾಜಿ - ತಸ್ರೀಫ್
ವಿಟ್ಲ : ಕೆದಿಲ ಗ್ರಾಮದ ಪಾಟ್ರಕೊಡಿ ಮೊಯ್ಯದ್ದೀನ್ ಜುಮಾ ಮಸೀದಿ ಇದರ ನೂತನ ಅಧ್ಯಕ್ಷರಾಗಿ ಹಮೀದ್ ಹಾಜಿ ಕೋಡಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮಸೀದಿ ಅಧ್ಯಕ್ಷ ಇಸುಬು ಕೆ.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಕೆ.ಎಸ್.ಇಸುಬು, ಪ್ರಧಾನ ಕಾರ್ಯದರ್ಶಿಯಾಗಿ ತಸ್ರೀಪ್, ಕಾರ್ಯದರ್ಶಿಯಾಗಿ ಇಬ್ರಾಹಿಂ ಬಾತಿಶ್ ಬಾಯಬೆ, ಕೋಶಾಧಿಕಾರಿಯಾಗಿ ಉಮರ್ ಕರಿಮಜಲು ಅವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಜಿ ಮಹಮ್ಮದ್ ಮಾಸ್ತರ್, ಖಾಸಿಂ ಪಾಟ್ರಕೊಡಿ, ಉಸ್ಮಾನ್ ಬಾಯಬೆ, ರಝಾಕ್ ಸನ್ಮಾನ್, ಬಶೀರ್ ಪಾಟ್ರಕೊಡಿ, ಲತೀಪ್ ಪಾಟ್ರಕೊಡಿ, ಉಸ್ಮಾನ್ ಎಂ.ಎಚ್, ಅಬ್ಬಾಸ್ ಕರಿಮಜಲು, ಅಬ್ದುಲ್ ಖಾದರ್ ಮುಸ್ಲಿಯಾರ್, ಅಶ್ರಪ್ ಪಿ. ಕೆ., ಮಜೀದ್ ಬಿ.ಎಚ್, ಅಬ್ದುಲ್ ರಹ್ಮಾನ್ ಪಾಟ್ರಕೊಡಿ, ಅಬ್ಬಾಸ್ ಪಾಟ್ರಕೊಡಿ, ಇಬ್ರಾಹಿಂ ಕರಿಮಜಲು ಹಾಗೂ ಉಸ್ಮಾನ್ ಪಾಟ್ರಕೊಡಿ ಅವರನ್ನು ಆರಿಸಲಾಯಿತು.
Next Story