ಇಸ್ಪೀಟು ಜುಗಾರಿ: 16 ಮಂದಿ ಬಂಧನ
ಮಲ್ಪೆ, ಜ.12: ಮಲ್ಪೆ-ಕೊಳ ರಸ್ತೆಯ ಲಕ್ಷ್ಮೀ ಲಾಂಡ್ರಿ ಅಂಗಡಿ ಹಿಂಬದಿ ಜ.11ರಂದು ಸಂಜೆ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ 16 ಮಂದಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಮಂಜು ಸಾಲಿಯಾನ್, ರಕ್ಷಿತ್, ಮಂಜು, ಸೋಮನಾಥ, ತಿರುಮಲ, ಶೇಖರ, ಮಂಜು ನಾಯಕ್ ದಾವಣಗೆರೆ, ವಿಶ್ವನಾಥ, ಅರ್ಜುನ್ ಯಮ ನೂರು, ಗಂಗೇಶ , ಮಲ್ಲೇಶ, ಹನುಮೇಶ, ರಮೇಶ ಯಮನೂರು, ರೂಪೇಶ ಬಂಧಿತ ಆರೋಪಿಗಳು. ಬಂಧಿತರಿಂದ ಒಟ್ಟು 62,480 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story